ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಡ್ವೆಂಚರ್ ಅಂದ್ರೆ ಸಾಮಾನ್ಯವಾಗಿ ಟ್ರಾವೆಲರ್ಸ್ ಗೆ ಬಹಳ ಇಷ್ಟ. ಅದರಲ್ಲೂ ಸೋಲೋ ಟ್ರಿಪ್ ಮಾಡುವವರು ಹಾಗೂ ಟ್ರಾವೆಲ್ ಮಾಡೋರಿಗೆ ವಯಕ್ತಿಕವಾಗಿ ಅಡ್ವೆಂಚರ್ ತುಂಬ ಇಷ್ಟಪಡ್ತಾರೆ. ಅದೇ ರೀತಿ ಸಾಕಷ್ಟು ಜನರಿಗೆ ವಿವಿಧ ರೀತಿಯ ಸಾಹಸಗಳನ್ನು ಮಾಡಲು ಬಯಸುತ್ತಾರೆ. ಸ್ಕೈ ಡೈವಿಂಗ್, ಹೈಕಿಂಗ್, ಬಂಜಿ ಜಂಪಿಂಗ್ ಇದೆ ತರಹದ ಬಹಳಷ್ಟು ಸಾಹಸಗಳನ್ನ ಮಾಡಲು ಜನರು ಬಯಸುತ್ತಾರೆ, ಇದೀಗ ಅಂತಹ ಅಡ್ವೆಂಚರ್ ಯಾವುದು ಎಂದು ನೋಡೋಣ ಬನ್ನಿ…

ಟ್ರೆಕ್ಕಿಂಗ್‌

ಟ್ರೆಕ್ಕಿಂಗ್‌ನಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ಐಸ್ ಟ್ರೆಕ್ ಮಾಡುವ ಕನಸು ಕಾಣುತ್ತಾರೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇಂತಹ ಹಲವು ಚಾರಣಗಳು ಲಭ್ಯವಿದ್ದು, ಚಳಿಗಾಲದಲ್ಲಿ ಒಮ್ಮೆ ಭೇಟಿ ನೀಡಬಹುದಾಗಿದೆ.

6 Pro Tips for Spring Skiing on Whistler Blackcomb

ಸ್ಕೀಯಿಂಗ್‌

ನವೆಂಬರ್ ಆರಂಭದಲ್ಲಿ, ಹಿಮಾಲಯದ ಎಲ್ಲಾ ತಪ್ಪಲುಗಳು ಮಂಜುಗಡ್ಡೆಯಿಂದ ಆವೃತವಾಗಿವೆ. ಮನಾಲಿ, ಲಡಾಖ್‌ನ ಸೋಲನ್ ವ್ಯಾಲಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಇಂತಹ ಸ್ಕೀಯಿಂಗ್‌ ಆಯೋಜಿಸಲಾಗುತ್ತದೆ. ಅದರಲ್ಲಿ ಹಾಜರಾಗುವ ಮೂಲಕ, ನೀವು ಸ್ಕೀಯಿಂಗ್‌ ಸ್ಪರ್ಧೆಗಳನ್ನು ವೀಕ್ಷಿಸಬಹುದು, ನಿಮಗೆ ಆಸಕ್ತಿಯಿದ್ದರೆ ಅವುಗಳಲ್ಲಿ ಭಾಗವಹಿಸಬಹುದು.

Adventure Tourism: ನೀವು ಸಾಹಸ ಪ್ರಿಯರೇ? ಈ ಚಳಿಗಾಲದಲ್ಲಿ ನೀವು ಇಷ್ಟಾದರೂ ಸಾಹಸ  ಮಾಡದಿದ್ದರೆ ಹೇಗೆ?! Vistara News

ಪಾರಾಗ್ಲೈಡಿಂಗ್‌

ಪ್ಯಾರಾಗ್ಲೈಡಿಂಗ್‌ನಂತಹ ಆಕಾಶ ಪ್ರಯಾಣಕ್ಕೆ ಬಿರ್ ಬಿಲ್ಲಿಂಗ್, ಪೆಹಲ್ಗಾಮ್, ಗುಲ್ಮಾರ್ಗ್, ಮನಾಲಿ ಮತ್ತು ಇತರ ಸ್ಥಳಗಳಲ್ಲಿ ಪ್ಯಾರಾಗ್ಲೈಡಿಂಗ್ ಮಾಡಲು ಉತ್ತಮ ಸ್ಥಳಗಳಾಗಿವೆ.

River Rafting in Himachal Pradesh

ರ್ಯಾಫ್ಟಿಂಗ್‌

ರಿಷಿಕೇಶದ ಗಂಗೆಯಲ್ಲಿ ರಿವರ್ ರ್ಯಾಫ್ಟಿಂಗ್‌ ಆನಂದಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಯಾವುದೇ ಹೆಚ್ಚುವರಿ ನೀರಿನ ಪ್ರಮಾಣವಿಲ್ಲದ ಕಾರಣ, ನೀವು ಸುಲಭವಾಗಿ ರ್ಯಾಫ್ಟಿಂಗ್‌ ಅನ್ನು ಅನುಭವಿಸಬಹುದು.

The post TRAVEL | ನಿಮಗೆ ಅಡ್ವೆಂಚರ್ ಅಂದ್ರೆ ಇಷ್ಟಾನ? ಹಾಗಾದ್ರೆ ಇದನ್ನ ಟ್ರೈ ಮಾಡಿ appeared first on HosadiganthaWeb.

Leave a Reply

Your email address will not be published. Required fields are marked *