ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈ ಮೇಲೆ ಬಿಸಿಲು ಬೀಳಿಸಿಕೊಳ್ಳಬೇಕು, ಇದರಿಂದ ವಿಟಮಿನ್ ಡಿ ಸಿಗುತ್ತದೆ ಹಾಗೂ ಚರ್ಮರೋಗಗಳಿಂದ ದೂರ ಇರಬಹುದು ಎಂದು ಹೇಳಲಾಗಿದೆ. ಆದರೆ ಈಗಿನ ಅತಿಯಾದ ತಾಪಮಾನದಿಂದ ಜನ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಕಳೆದ ವರ್ಷ ಇದೇ ಫೆಬ್ರವರಿಯಲ್ಲಿ ಇಷ್ಟೊಂದು ಬಿಸಿಲು ಇರಲಿಲ್ಲ, ಆದರೆ ವರ್ಷದಿಂದ ವರ್ಷಕ್ಕೆ ಹವಾಮಾನದಲ್ಲಿ ಸಾಕಷ್ಟು ಬದಲವಾಣೆ ಆಗುತ್ತಿದೆ. ಸದ್ಯಕ್ಕೆ ರಾಜ್ಯದಲ್ಲಿ ತಡೆಯಲಾಗದ ಬಿಸಿಲಿದೆ. ಇದರಿಂದಾಗಿ ಚರ್ಮದ ಸಮಸ್ಯೆ. ಅಲರ್ಜಿ ಹಾಗೂ ವಿಟಮಿನ್ ಡಿ ಕೊರತೆಗಳನ್ನು ಜನ ಅನುಭವಿಸುತ್ತಿದ್ದಾರೆ.

ಒಟ್ಟಾರೆ ಶೇ.95 ರಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಬಾಧಿಸಿವೆ. ಬೆಳಗ್ಗೆ ಎಂಟು ಗಂಟೆಗೆ ಮೊದಲು ಹಾಗೂ ಮಧ್ಯಾಹ್ನ 3:30-5  ಗಂಟೆಯ ನಡುವೆ ಕೆಲ ಸಮಯ ಬಿಸಿಲಿಗೆ ಮೈಯೊಡ್ಡಬಹುದು. ಉಳಿದ ಸಮಯದಲ್ಲಿ ಸನ್‌ಸ್ಕ್ರೀನ್ ಬಳಕೆ ಮಾಡಿ. ಆದಷ್ಟು ಹೊರಗೆ ಹೋಗುವುದನ್ನು ಅವಾಯ್ಡ್ ಮಾಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಬಿಸಿಲಿಗೆ ಹೆಚ್ಚು ಸಮಯ ಮೈ ಒಡ್ಡಿಕೊಳ್ಳುವವರಲ್ಲಿ ಚರ್ಮ ರೋಗಗಳು ಬಾಧಿಸುತ್ತಿವೆ. ಹಾಗಾಗಿ ಎಸ್‌ಪಿಎಫ್ ಬಳಕೆ ಕಡ್ಡಾಯ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

Leave a Reply

Your email address will not be published. Required fields are marked *